ಅಂದು-ಇಂದು

ತಂಗಾಳಿ ಹೊತ್ತು ತಂದಿದೆ ನೆನಪು,
ಜೊತೆ ಕಳೆದ ಸಮಯಗಳದೇ ಹೊಳಪು
ಮೌನದಲ್ಲೂ ಮಾತಿತ್ತು ಅಂದು
ಮನಸ್ಸುಗಳು ಮುರಿದದ್ದೇ ಇಂದು.

ಜೊತೆಕಳೆದ ದಿನಗಳೇ ಮಧುರ
ತುಂಟ ಚೇಷ್ಠೆಗಳದೇ ಸಡಗರ
ಹುಡುಗಾಟಿಕೆಯ ಜೀವನ ಅಂದು
ದುಡುಕು ಮುಂಗೋಪ ಇಂದು.

ನೋವು ನಲಿವಲು ಜೊತೆಯಿದ್ದ ಕೈಗಳು
ಒಟ್ಟಾಗಿ ಮೊಡೆದ ಕನಸಿನ ಮೂಟೆಗಳು
ಮುಗ್ಧ ಸ್ನೇಹವದು ಅಂದು
ಲಾಭ ನಷ್ಟದ ವ್ಯವಹಾರ ಇಂದು.

ಬಧುಕಿನ ಚಕ್ರದ ಸುಳಿಯೊಳು
ಸಿಲುಕಿದೆವು ನಾವು ಇಳೆಯೊಳು
ಬಾಲ್ಯದ ದಿನಗಳಂತೆ ಅಂದು
ಸಿಗದು ನಿಜಸ್ನೇಹ ಇಂದು..

ಭವಿಷ್ ಶೆಟ್ಟಿ✒️

ನಡ್ಯೋಡಿ ಗುತ್ತುದ ಸತ್ಯೊಲೆಗ್ ಭಕ್ತಿದ ಸುಗಿಪು

ಪಿಂಗಾರ ಸಿಂಗಾರೊಡೆ
ಪೊರ್ಲಾತಿನ ಮಾಯೊಲು.
ಜೀಟಿಗೆದ ಆ ಬೊಲ್ಪುಡೆ,
ಅರ್ಲ್’ದಿನ ಧರ್ಮದೈವೊಲು.

ಎಕ್ಕಾರ್’ದ ರಾಜ್ಯೊಡು,
ನಡ್ಯೊಡಿದ ಪಟ್ಟೊಡು,
ಪತ್ತ್ ಪತ್ತಿನ ಶಕ್ತಿಲು,
ಐವೆರ್ ಮಾಶಕ್ತಿಲು.

ದೇರಿಂಜೆದ ಗಿರಿಟ್ಟಾಯಿನ,
ಉಲ್ಲಾಯನ ಧರ್ಮೊನು
ದೆರ್ತ್’ದೆ ಕಾತೊಂದಿನ,
ಗುತ್ತುದ ಸತ್ಯೊಲು.

ಮುದ್ದೆರೆ ಭಕ್ತಿದ ಮದಿಪುಗು,
ತೆರನ ದಿಂಜಾದೆರ್
ಸೀಮೆದೆ ಗಡುದಾಂತಿನ
ಮಾಯದ ಮಾಯಕಾರೆರ್.

-ಭವಿಷ್ ಶೆಟ್ಟಿ

ಮಿಥ್ಯ ಮಿತ್ರರು

ನೀನುತ್ತಮ, ನೀ ಶ್ರೇಷ್ಠ
ಎಂಬಂತೆ ಹೊಗಳಿಕೆಯ ನುಡಿಯಾಡಿದವರೇ..
ಅವ ಹಂಗೆ, ಇವ ಹಿಂಗೆ
ಎಂದು ಕೊಂಕ ನುಡಿವರು ಹಿಂದಿಂದ|

ಮೋರೆಯ ಮುಂದು,
ಗೆಳೆತನದ ನುಡಿಗೈದವರೇ,
ಇನ್ನೆಲ್ಲೋ ನಿನ್ನ ಕುರಿತು
ಮಿಥ್ಯವ ಪಸರಿಸುವರು|

ಆಪ್ತರೆಂಬವರಿಲ್ಲ ರೂಢಿಯೊಳು
ಬರಿ ಹುಸಿ-ನಗೆಯವರೆ ಹರಡಿಹರು,
ಸೆಳೆವರು ಮಾತಿನ ಮೋಡಿಯೊಳು
ಕಾಠಿಣ್ಯದಿ ಜೊತೆ ನೀಡರು ನಮ್ಮವರೆಂಬವರು||

Devu Poonja- A Tuluva Hero

The dawn had struck Perinje Gutthu. It was the time in Tulunadu region where the rulers had to stand by the King to assist him in the event of an enemy attack. But in Perinje Gutthu, since the demise of Manjanna Poonja, there was none to courageously lead the war, Also The King had ordered for handover of the Gutthu authority since there was no potent dynast.

Shankari Ponnja, wife of Manjanna Poonja was disturbed by this order, according to Bunt tradition it’s the nephew who should be validating as heir after his maternal uncle, while the timid Deramu, nephew of Majanna Poonja had backed off fearing the war and Shankari Poonja couldn’t digest the fact that, the house where great warriors were born wasn’t having a powerful heir now.

Devu Poonja, a sixteen year aged boy came home after his routine playtime in search of his mother, only to find her in a dark room of the Perinja Gutthu House. Shocked by the instance young Devu Poonja stood clueless, unable to fathom the reason for his mother’s tears. When asked, he heard from her the reason for her grief. It was now Devu Poonja’s respsibltity to solace his widow mother while he couldn’t think of any way to save his Gutthu identity other than by leading the war himself. Yes! A sixteen year aged boy wanted to lead the violent war, which was no child’s play. Even Shankari Poonjedhi was agitated to hear this, she pushed his words aside. Devu Poonja was not just another immature kid who could be easily neglected. He filled confidence in his mother by saying, A tiger can only gives birth to another tiger not a rat and Devu Poonja who is the son of Manjanna Poonja and nephew of Kantanna Athikari will prove to be no less than his ancestors.
His words brought a ray of hope in Shankari Poonjedhi, but the one against whom he had to fight was not any ordinary warrior. Manimajala Gutthu Dugganna Konde, who had fought and won seven wars, was a well known warrior by then. So, Shankari Poonjedhi asked Devu to master the art of warfare from her elder brother Kanthanna Athikari.

As ordered by his mother, under the guidance of his maternal uncle, Devu Poonja mastered the tricks of warfare and was even able to defeat his uncle during the practice sessions. Charmed by his nephew, Kanthana thinks what he shall gift Devu (“Panvu Bangar kornda karchi aadh povu, mandhe kadapudunda mannadh pover”). As if reading his uncles thoughts Devu Poonja himself comes up with a request and asks his uncle to send Daiva Jumadi along with him, which he used to worship. Agreeing for his nephew’s request, Kanthanna offers prayers to Daiva Jumadi to take his blessings.

At the Karandetthi war field Dugganna Konde faces Devu Poonja and was surprised to see a young boy who had come to fight with him. The war hero of Manimajala Gutthu mocks Devu and asks him to flee the field, But Devu in return teases Dugganna Konde by saying he is only good at words and not wiling to fight. Raged by the words of Devu, Dugganna Konde initiates a combat and grips Poonja and locks him under his arms without much hustle.
Unable to bear the pain of Dugganna Konde’s grip, Devu Poonja rebuked Daiva Jumadi, “what has my uncle sent along with me? This Daiva is worthless and of no use”. Within seconds of his disapproval of Jumadi, Devu could feel enormous strength in his body The powerful Daiva Jumadi as he always said, “Onji Leppugu, patth oo kendh daiva yaan undaape” (If you believe in me, I’ll be present for your help at just one call), was now present for Devu’s help and had proved true to his words. He had blessed Poonja with magical strength.
Devu Poonja thus managed to escape from the grips of Dugganna Konde and within no time reversed the grip on Dugganna Konde and held him tight. Eventually Devu Poonja went on to win the war after he cut off Dugganna Konde’s head.

Later, Devu Poonja with the blessings of Daiva Jumadi grew to be one of the most prominent personalities of Tulunadu

ಹೇಳದ ಕಥೆ

ಪಡುಗಡಲ ತಡಿಯಲ್ಲಿ ಕುಳಿತು,
ಕಿವಿಯಾಗಿಸಿ ನಿನ್ನ ಪಿಸುಮಾತಿಗಾತು,
ಮೈ ಮರೆಯಬೇಕು ನಾನಿನಿತು…

ಮನದ ಬೀಗ ಒಡೆದು,
ನುಡಿಗಳ ಹೊರಗೆ ಎಳೆದು,
ಮಾತಾಗಿಸಬೇಕು ನಿನ್ನಲ್ಲಿಂದು…

ಹೇಳದ ಕಥೆ ಹಲವಿದೆ,
ವ್ಯಥೆಯಾಗಿ ಈಗ ಉಳಿದಿದೆ,
ಅರಿಕೆ ನಿನ್ನಲ್ಲೆ, ಮಾಡಬೇಕೆಂದೆನಿಸಿದೆ..

ಎನ್ನಾಲಾಲ್ ಮದಿಮಾಲ್

ಸಾಲ್ ಕಂಡದ ಪುಣಿಟ್ಟ್ ಎನನ್,
ಕಂಡ್’ದೇನೆ ತೂಯಲಾಲ್|
ಸಾರ ಕಣತ್ತ ಸರಮಾಲೆ,
ದಿಟ್ಟಿಡೇನೆ ಕೊರ್ಯಲಾಲ್|
ಮುಗುರು ತೆಲಿಕೆದ ಮೋನೆದಾಲ್,
ಎನ್ನಾಲಾಲ್ ಮದಿಮಾಲ್||

ಮೆಲ್ಲ ಮೆಲ್ಲ ಪಜ್ಜೆಡ್,
ಎನ್ನಂಚಿ ಬತ್ತಲ್|
ಉಡಲ ತಡ್ಯೊಡುಂತುದು,
ಉಲಯಿ ಬರೊಡ ಕೇಂಡಲ್|
ಜೊತೆಯಾಪಿನ ಮನಸ್’ಡೆ,
ಎನ್ನಾಲಾಲ್ ಮದಿಮಾಲ್||

~ಭವಿಷ್ ಶೆಟ್ಟಿ

ರಾಗ

ಪಿದಡ್ಂಡ್ ರಾಗ,
ಉಡಲ್’ರ್ದ್ ಸೀದ..
ಮನಸೆನ್ನ ಕೈ ಜಾರ್ದ್ಂಡ್,
ನಿನ್ನಂಚಿ ಮರ್ಲಾತ್ಂಡ್|

ನಲಿತ್ತೊಂದೆ ಬತ್ತ,
ತೆಲಿತ್ತೊಂದೆ ಉಂತ್ಯ..
ಎನ್ನ ಪಾಡ್ ದಾದಾತ್ಂಡ್,
ನಿನ್ನ ರೂಪನೆ, ಕಣ್ಣ್ ಸೇರ್ದ್ಂಡ್|

ತಿರ್ಗ್’ದಿಂಚಿ ತೂಲ,
ಕಾತೊಂದೆ ದಿನಾಲ..
ಮೋಕೆದ ಅಸರಾಲಯ,
ಎನ್ನ ಬದ್’ಕ್’ಗ್ ಒಸರಾಲಯ….||

– ಭವಿಷ್ ಶೆಟ್ಟಿ

ಮುನಿಸು

ಕಾರಣವ ಹೇಳದೆ ದೂರ ನೀ ನಿಂದೆಯಾ,

ನಮ್ಮೀ ಸಲುಗೆ ನೀ ಹೀಗೆ ಮರೆತೆಯಾ.

ತಂಗಾಳಿ ಕೂಡ ಹೊತ್ತು ತಂದಿದೆ ನೆನಪು,

ನಿನ್ನೀ ನೆನಪಲ್ಲೇ ತುಂಬಿದೆ ಹುರುಪು.

ಆ ನಿನ್ನ ಕಣ್ಣ ಭೇಟಿಯಿಂದಲೆ ಬೇಟೆಯಾದೆ ನಾ,

ನನ್ನೆದೆಯಲ್ಲೆಲ್ಲಾ ತುಂಬಿತು ನಿನದೇ ನರ್ತನ.

ವಿರಸ ನೀನೀಗ ತಳೆದರೆ,

ನನ್ನೀ ಮನಸು ಒಪ್ಪುವುದೇ.

ಕಾರ್ಮೋಡ ತಡೆಯಿತೇ ಬೆಳದಿಂಗಳ ಬೆಳಕು,

ಸಾಗರದಲೆಯು ಮರೆಯಿತೇ ಚಂದ್ರನ ನೆನಪು.

ಆ ನೋಟದಲ್ಲೇ ಮೂಡಿದೆ ಅಕ್ಷರ ಸಾಲು,

ಹುಸಿ ಮುನಿಸು ಇದೆಂದು ಆಯಿತು ಸಾಬೀತು.
🖌ಭವಿಷ್ ಶೆಟ್ಟಿ 

ಭಾವೈಕ್ಯ

nature-02.jpgಸೃಷ್ಟಿಯೆಂಬುದು ಬರಿಯ ಸೊಬಗಲ್ಲ,

ಅದರೊಳಗಿನ ತಿಳಿಯ ಕೇಳ!

ಮೂಢ ಮಾನವನೇಕೆ ಅರಿಯ.

ಲೋಕ ಭಾವೈಕ್ಯದ ಕರೆಯ!!…

 
ಗಿರಿಯ ಸಿರಿಯಲಿ ಹುಟ್ಟಿ,

ಕಡಲೊಡಲ ಸೇರುವ ಜಲಕ್ಕಾವ ಭಾಷೆ.!

ಸಾಸಿರ ಉದರವ ತಣಿಸುವ ನದಿಗೆ

ನುಡಿಯೆಂಬುದೊಂದು ತಡೆಯೇ?!!

 

ನಭದಿ ಮಿನುಗುವ ತಾರೆಗಲ್ಲ,

ಸೀಮೆ-ಅಧಿಕಾರವೆಂಬ ಗೊಡವೆ!

ಲೋಕ ಪ್ರಜ್ವಲಿಪ ಭಾನಿಗಿಹುದೇ,

ಬಡವ ಬಲ್ಲಿದನೆಂಬ ಪರಿವೆ?!!

 
ಮನಬಲದಿ ಸಾಗುವ ವಾಯುವಿಗಲ್ಲ,

ಮೇಲು ಕೀಳುಗಳ ಚಿಂತೆ!

ಜಗವ ನಡೆಸುವ ಗಾಳಿಗಿಹುದೇ,

ಅಸ್ಪ್ರಷ್ಯತೆಯ ಅಂಜಿಕೆ?!!

 
ದಿಶ-ದಿಶವ ಬೆಳಗುವ ಜ್ಯೋತಿಗೆ,

ಇಹುದಾವ ಜಾತಿ-ಧರ್ಮದ ಸಲುಗೆ!

ಮಂಟಪದಿ ಬೆಳಗುವ ದೀಪಕ್ಕಿಹುದೇ,

ದೇವನ ನಾಮದ ಚಿಂತೆ?!!

 
ಯಗ ಯುಗದಿಂದ ಪುರೆವ ಇಳೆಗೆ,

ಕಾಣಲಿಲ್ಲ ತನುಜರಲಿ ತೊಡಕು!

ವಾತ್ಸಲ್ಯದಿ ಸಲಹುವ ಧರೆಗಿಹುದೇ,

ಹೆಣ್ಣು-ಗಂಡೆಂಬ ಒಡಕು?!!

 
ಪಂಚಭೂತಗಳಲ್ಲಿ ಇಲ್ಲದ ಬೇಧ,

ಪಂಚೇಂದ್ರಿಯದಿ ಕೂಡಿದ ಮಾನವಗೇಕಯ್ಯ!

ಭಾವೈಕ್ಯದ ಬದುಕದೇ ಸುಂದರ,

ಬೇಧ ಮರೆತ ಜೀವನವೇ ಮಧುರ!!

ನೆನಪು

ಬೀಜಿ ಗಾಳಿಲ ಲೆತ್ತ್ ಪಂಡ್ಂಡ್,
ನಿನ್ನ ನೆನಪುದ ಕತೆ ಸಾರ…
ಮೋಡ ಸಾಲ್’ಡ್ ಮೂಡೊಂದುಂಡು,
ನಮ ಕಲೆಯಿನ ದಿನಮಾನಲ…

ಈ ಅರ್ಲಾದಿನ ಆ ನಂದಲ,
ತಟಪಟ ರಾವೊಂದುಂಡು…
ಕತ್ತಲೆ ಸಾದಿಡ್ ಎನ್ನ ಪಯನಲ,
ನನ ಒಂಚಿ ಪೊವೊಂದುಂಡು?…

ಉಡಲೆನ್ನ ಬರಡಾಂಡ್ 

ಕೇನಂದೆ ನಿನ್ನ ಸ್ವರ ಮಾಲೆ,

ಪಕ್ಕಿ ಯಾನ್ ನೆಲ ಪತ್ತ್ ದೆ

ರೆಕ್ಕೆ ಈ ಜೊತೆ ದಾಂತೆನೆ.

clouds-jpg