ಮುನಿಸು

ಕಾರಣವ ಹೇಳದೆ ದೂರ ನೀ ನಿಂದೆಯಾ,

ನಮ್ಮೀ ಸಲುಗೆ ನೀ ಹೀಗೆ ಮರೆತೆಯಾ.

ತಂಗಾಳಿ ಕೂಡ ಹೊತ್ತು ತಂದಿದೆ ನೆನಪು,

ನಿನ್ನೀ ನೆನಪಲ್ಲೇ ತುಂಬಿದೆ ಹುರುಪು.

ಆ ನಿನ್ನ ಕಣ್ಣ ಭೇಟಿಯಿಂದಲೆ ಬೇಟೆಯಾದೆ ನಾ,

ನನ್ನೆದೆಯಲ್ಲೆಲ್ಲಾ ತುಂಬಿತು ನಿನದೇ ನರ್ತನ.

ವಿರಸ ನೀನೀಗ ತಳೆದರೆ,

ನನ್ನೀ ಮನಸು ಒಪ್ಪುವುದೇ.

ಕಾರ್ಮೋಡ ತಡೆಯಿತೇ ಬೆಳದಿಂಗಳ ಬೆಳಕು,

ಸಾಗರದಲೆಯು ಮರೆಯಿತೇ ಚಂದ್ರನ ನೆನಪು.

ಆ ನೋಟದಲ್ಲೇ ಮೂಡಿದೆ ಅಕ್ಷರ ಸಾಲು,

ಹುಸಿ ಮುನಿಸು ಇದೆಂದು ಆಯಿತು ಸಾಬೀತು.
🖌ಭವಿಷ್ ಶೆಟ್ಟಿ 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s