ಭಾವೈಕ್ಯ

nature-02.jpgಸೃಷ್ಟಿಯೆಂಬುದು ಬರಿಯ ಸೊಬಗಲ್ಲ,

ಅದರೊಳಗಿನ ತಿಳಿಯ ಕೇಳ!

ಮೂಢ ಮಾನವನೇಕೆ ಅರಿಯ.

ಲೋಕ ಭಾವೈಕ್ಯದ ಕರೆಯ!!…

 
ಗಿರಿಯ ಸಿರಿಯಲಿ ಹುಟ್ಟಿ,

ಕಡಲೊಡಲ ಸೇರುವ ಜಲಕ್ಕಾವ ಭಾಷೆ.!

ಸಾಸಿರ ಉದರವ ತಣಿಸುವ ನದಿಗೆ

ನುಡಿಯೆಂಬುದೊಂದು ತಡೆಯೇ?!!

 

ನಭದಿ ಮಿನುಗುವ ತಾರೆಗಲ್ಲ,

ಸೀಮೆ-ಅಧಿಕಾರವೆಂಬ ಗೊಡವೆ!

ಲೋಕ ಪ್ರಜ್ವಲಿಪ ಭಾನಿಗಿಹುದೇ,

ಬಡವ ಬಲ್ಲಿದನೆಂಬ ಪರಿವೆ?!!

 
ಮನಬಲದಿ ಸಾಗುವ ವಾಯುವಿಗಲ್ಲ,

ಮೇಲು ಕೀಳುಗಳ ಚಿಂತೆ!

ಜಗವ ನಡೆಸುವ ಗಾಳಿಗಿಹುದೇ,

ಅಸ್ಪ್ರಷ್ಯತೆಯ ಅಂಜಿಕೆ?!!

 
ದಿಶ-ದಿಶವ ಬೆಳಗುವ ಜ್ಯೋತಿಗೆ,

ಇಹುದಾವ ಜಾತಿ-ಧರ್ಮದ ಸಲುಗೆ!

ಮಂಟಪದಿ ಬೆಳಗುವ ದೀಪಕ್ಕಿಹುದೇ,

ದೇವನ ನಾಮದ ಚಿಂತೆ?!!

 
ಯಗ ಯುಗದಿಂದ ಪುರೆವ ಇಳೆಗೆ,

ಕಾಣಲಿಲ್ಲ ತನುಜರಲಿ ತೊಡಕು!

ವಾತ್ಸಲ್ಯದಿ ಸಲಹುವ ಧರೆಗಿಹುದೇ,

ಹೆಣ್ಣು-ಗಂಡೆಂಬ ಒಡಕು?!!

 
ಪಂಚಭೂತಗಳಲ್ಲಿ ಇಲ್ಲದ ಬೇಧ,

ಪಂಚೇಂದ್ರಿಯದಿ ಕೂಡಿದ ಮಾನವಗೇಕಯ್ಯ!

ಭಾವೈಕ್ಯದ ಬದುಕದೇ ಸುಂದರ,

ಬೇಧ ಮರೆತ ಜೀವನವೇ ಮಧುರ!!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s